ಗೆಳೆಯ ಲಕ್ಷ್ಮಣ ನಿನ್ನ ದೇಶಭಕ್ತಿ ಸಂಶಯಪಟ್ಟರೆ ಕಾಂಗ್ರೆಸ್ ಬಿಟ್ಟು ಹೊರಗೆ ಬಾ – ಸಿಟಿ ರವಿ
ಬೆಳಗಾವಿ : ಲಕ್ಷ್ಮಣ ಸವದಿ ನನಗೆ 15 ವರ್ಷದ ಗೆಳೆಯ. ಆತ ಹುಟ್ಟಿನಿಂದಲೇ ದೇಶಭಕ್ತ. ಈಗ ಕಾಂಗ್ರೆಸ್ ಗೆ ದೇಶಭಕ್ತಿ ಪಾಠ ಮಾಡು. ನಿಮ್ಮ ದೇಶಭಕ್ತಿ ಕುರಿತು ಸಂಶಯಪಟ್ಟರೆ ಕಾಂಗ್ರೆಸ್ ಬಿಟ್ಟು ಹೊರಗೆ ಬಾ ಎಂದು ಮಾಜಿ ಸಚಿವ ಟಿ.ಟಿ ರವಿ ಸವದಿ ಕಾಲೆಳೆದರು.
ಬೆಳಗಾವಿ ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಪಾಕಿಸ್ತಾನಕ್ಕೆ ಜೈಕಾರ ಕೂಗುವುದು ಕಾಂಗ್ರೆಸ್ ನವರು. ಆದರೆ ಭಾರತ್ ಮಾತಾಕಿ ಜೈ ಎನ್ನಲು ಖರ್ಗೆ ಅನುಮತಿ ಪಡೆಯುವ ಪರಿಸ್ಥಿತಿ ಸವದಿಗೆ ಬಂದಿದೆ. ಅವರ ಗೌರವಕ್ಕೆ ದಕ್ಕೆ ಬಂದರೆ ಕಾಂಗ್ರೆಸ್ ಬಿಟ್ಟು ಹೊರಬರಲಿ ಎಂದರು.
ನಾವು ಸವದಿ ಅವರು ಸೋತರು ಡಿಸಿಎಂ ಹುದ್ದೆ ನೀಡಿದ್ದೇವು. ಆದರೆ ಅವರು ಕಾಂಗ್ರೆಸ್ ಗೆ ತೆರಳಿ ಅಲ್ಲಿ ಶಾಸಕರಾಗಿ ಉಳಿದಿದ್ದಾರೆ. ಅವರಿಗೆ ಮಂತ್ರಿ ಸ್ಥಾನದ ಭರವಸೆ ನೀಡಿದ್ದಾರೆ ಅಷ್ಟೇ. ಸವದಿ ಮೊಳಕೈ ಹಾಗೂ ಮೂಗಿಗೆ ಕಾಂಗ್ರೆಸ್ ತುಪ್ಪ ಸವರಿದೆ. ಆತ್ಮೀಯ ಗೆಳೆಯನಿಗೆ ಒಳ್ಳೆಯದಾಗಲಿ ಎಂದರು.


