ನಾನು ಪ್ರಧಾನಿ ಹುದ್ದೆಗೆ ಏರಬಹುದು ; ಬಾಗಲಕೋಟೆ ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅಚ್ಚರಿ ಹೇಳಿಕೆ
ಬಾಗಲಕೋಟೆ : ನನ್ನದು ಗಜಕೇಸರಿ ಯೋಗ. ನಾನು ಹುಟ್ಟಿದ ನಂತರ ನಮ್ಮ ತಂದೆ ಶಾಸಕರಾಗಿ ಆಯ್ಕೆಯಾದರು. ಸಧ್ಯ ನನಗೆ ಸಂಸದೆಯಾಗುವ ಅವಕಾಶ ಲಭಿಸಿದೆ, ಮುಂದೆ ಪ್ರಧಾನಿ ಆಗಬಹುದು ಎಂದು ಬಾಗಲಕೋಟೆ ಕೈ ಅಭ್ಯರ್ಥಿ ಹಾಗೂ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಅಭಿಪ್ರಾಯ ಹಂಚಿಕೊಂಡರು.
ಬಾಗಲಕೋಟೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ಮತಯಾಚನೆ ಮಾಡಿದ ನಂತರ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಇವರು. ನಾನು ಚಿಕ್ಕವಳಿದ್ದಾಗ ಮುಂದೆ ಪ್ರಧಾನಿ ಆಗುತ್ತೇನೆ ಎಂದು ಹೇಳುತ್ತಿದ್ದೆ. ಅದರಂತೆ ಈಗ ಲೋಕಸಭಾ ಚುನಾವಣಾ ಸ್ಪರ್ಧೆ ಅವಕಾಶ ಸಿಕ್ಕಿದೆ. ಮುಂದೆ ಪ್ರಧಾನಿ ಕೂಡಾ ಆಗಬಹುದು ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಧ್ಯ ಈ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ತಮ್ಮ ಅನೇಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು ಸಂಯುಕ್ತಾ ಪಾಟೀಲ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಅನೇಕರು ಕಾಲೆಳೆದಿದ್ದಾರೆ.
ಒಂದು ಅವಕಾಶ ಕೊಡಿ ನಿಮ್ಮ ಜೀತದಾಳಾಗಿ ಕೆಲಸ ಮಾಡುತ್ತೇನೆ. ಮನೆ ಯಜಮಾನಿಗೆ ಸರ್ಕಾರ ತಲಾ 2 ಸಾವಿರ ಹಣ ನೀಡುತ್ತಿದೆ. ಪುರುಷರಿಗೆ ಕೊಟ್ರೆ ಸಂಜೆ ಯಾವ ಅಂಗಡಿಗೆ ಹೋಗುತ್ತೆ ಅಂತ ಗೊತ್ತಿದೆ ಎಂದರು.
Samyukta patil, Shivanad patila, Bagalkote, BJP, Narendra modi, Nanu pradani,


