ಭೀಕರ ರಸ್ತೆ ಅಪಘಾತ ; ಮೂವರಿಗೆ ಗಂಭೀರ ಗಾಯ
ಬೈಲಹೊಂಗಲ : ದ್ಚಿಚಕ್ರ ವಾಹನ ಹಾಗೂ ಕಾರು ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರರು ಗಂಭೀರ ಗಾಯಗೊಂಡ ಘಟನೆ ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ಸೇತುವೆ ಮೇಲೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ಕಲಭಾಂವಿ ಗ್ರಾಮದ ದ್ವಿಚಕ್ರ ವಾಹನ ಸವಾರ ಸುರೇಶ ಭೀಮಶೆಪ್ಪ ಪೂಜೇರ (27), ಹಿಂಬದಿ ಸವಾರ ದೇವಪ್ಪ ಹನುಮಂತ ಅಲಕ್ಕನವರ (27), ಪಟ್ಟಿಹಾಳ ಗ್ರಾಮದ ಕಾರು ಚಾಲಕ ವಿರುಪಾಕ್ಷ ಚಂದರಗಿ ಗಂಭೀರ ಗಾಯಗೊಂಡಿದ್ದಾರೆ.
ದ್ವಿಚಕ್ರ ಸವಾರರು ಬೈಲಹೊಂಗಲದಿಂದ ಮಾರ್ಗದಿಂದ ಕಲಭಾಂವಿಗೆ ತೆರಳುತ್ತಿದ್ದರು. ಬೆಳವಡಿಯಿಂದ ಕಾರು ಬರುವಾಗ ಈ ದುರ್ಘಟನೆ ನಡೆದಿದೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


