ಶಂಕರಗೌಡ ಪಾಟೀಲರಿಗೆ ಲೋಕಸಭಾ ಟಿಕೆಟ್ ನೀಡುವಂತೆ ಆಗ್ರಹ
ಬೆಳಗಾವಿ : ಕಳೆದ ಮೂರು ದಶಕಗಳಿಂದ ಶಂಕರಗೌಡ ಪಾಟೀಲ ಅವರು ಬಿಜೆಪಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ ಅವರ ಸೇವೆ ಗಮನಿಸಿ ಬಿಜೆಪಿ ಹೈಕಮಾಂಡ್ ಲೋಕಸಭಾ ಟಿಕೆಟ್ ನೀಡುವಂತೆ ನ್ಯಾಯವಾದಿ ಎನ್.ಆರ್.ಲಾತೂರ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಮಾಜಿ ಸೈನಿಕರು, ಸಮಾಜ ಸೇವಕರು ಹಾಗೂ ವಕೀಲರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು. ಶಂಕರಗೌಡ ಪಾಟೀಲ್ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅಭ್ಯರ್ಥಿ ಸ್ಥಳೀಯವಾಗಿರಬೇಕು ಅವರು ಜನರಿಗೆ ಸಿಗುವಂತಿರಬೇಕು. ಹಾಗಾಗಿ, ಸುಮಾರು 40 ವರ್ಷಗಳಿಂದ ಶಂಕರಗೌಡ ಪಾಟೀಲ್ ಇಲ್ಲೆ ಇದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.
ರಾಜಕೀಯ ಪಕ್ಷಗಳು ತಮ್ಮದೇ ಆದ ವಿಚಾರ ಹೊಂದಿರುತ್ತವೆ. ಅದನ್ನು ನಾವು ಒಪ್ಪಲೇಬೇಕು. ಟಿಕೆಟ್ ಕೊಡಲಿಲ್ಲ ಎಂದರೆ ನಮ್ಮ ಸಂಘಟನೆ ಇದೆ. ಅದು ತೆಗೆದುಕೊಂಡಂತೆ ನಾವು ನಿರ್ಧಾರ ಮಾಡುತ್ತೇವೆ ಎಂದ ಎನ್.ಆರ್.ಲಾತೂರ್ ಅವರು, ಶಂಕರಗೌಡ ಪಾಟೀಲ ಅವರಿಗೆ ಟಿಕೆಟ್ ಕೊಟ್ಟಿದ್ದೆ ಆದಲ್ಲಿ 3-4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ರಾಜೇಂದ್ರ ಕಲಘಟಗಿ, ಚಂದ್ರಕಾಂತ ಮಜಗಿ, ಎಚ್.ಡಿ.ಕಾಟ್ವಾ, ಮದನಕುಮಾರ ಭೈರಪ್ಪನವರ, ನೀಲಕಂಠ ಮಾಸ್ತಮರಡಿ ಸೇರಿ ಮತ್ತಿತರರು ಇದ್ದರು.


