Select Page

Advertisement

ಕರ್ನಾಟಕಕ್ಕೆ ಅಂಬೇಡ್ಕರ್ ನಾಡು ಎಂದು ನಾಮಕರಣ ಮಾಡಿ – ರಮೇಶ್ ಜಾರಕಿಹೊಳಿ

ಕರ್ನಾಟಕಕ್ಕೆ ಅಂಬೇಡ್ಕರ್ ನಾಡು ಎಂದು ನಾಮಕರಣ ಮಾಡಿ – ರಮೇಶ್ ಜಾರಕಿಹೊಳಿ

ಬೆಳಗಾವಿ : ಇತಿಹಾಸ ಪುರುಷರ ಮೇಲೆ ನನಗೆ ಅಪಾರ ಅಭಿಮಾನ ಇದೆ, ಕರ್ನಾಟಕ ರಾಜ್ಯಕ್ಕೆ ಅಂಬೇಡ್ಕರ್ ನಾಡು ಎಂದು ಹೆಸರು ಇಡಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು, ರಾಜ್ಯದ ಹೆಸರು ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಇತಿಹಾಸದ ಎಲ್ಲಾ ನಾಯಕರ ಮೇಲೆ ನನಗೆ ಅಭಿಮಾನ ಇದೆ‌. ಅಂಬೇಡ್ಕರ್ ಅವರ‌ ಕೆಲಸದ ಜೀವಂತ ನಿದರ್ಶನ ನಮ್ಮ ಮುಂದಿದೆ. ರಾಜ್ಯಕ್ಕೆ ಅಂಬೇಡ್ಕರ್ ನಾಡು ಎಂದು ಹೆಸರಿಡಲಿ ಎಂದರು.

ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ – ರಮೇಶ್ ಜಾರಕಿಹೊಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಪರೇಷನ್ ಕಮಲದಿಂದ ಬೀಳಲ್ಲ. ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ಪತನದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಬಹುದು ಎಂದು ಜಾರಕಿಹೊಳಿ ಭವಿಷ್ಯ ನುಡಿದರು.

Advertisement

Leave a reply

Your email address will not be published. Required fields are marked *

error: Content is protected !!