ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧಿಸುವಲ್ಲಿ ಸವದತ್ತಿ ಪೊಲೀಸರು ಯಶಸ್ವಿ
ಸವದತ್ತಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮನೆಗಳ ಕೆಟಕಿ ಬಾಗಿಲುಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದ ಮನೋಜ್ ಈಶ್ವರ್ ಶಿವಳ್ಳಿ ಈತನನ್ನು ಸವದತ್ತಿ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ಪಟ್ಟಣದ ರಾಮಪುರ ಸೈಟ್ ನವನಾಗಿದ್ದು ಹಿತನಿಂದ ೮೦ ಗ್ರಾಂ ೫೦೦ ಮಿಲಿ ಗ್ರಾಂ ಚಿನ್ನದ ಆಭರಣ ೨೦೦ ಗ್ರಾಂ ಬೆಳ್ಳಿಯ ಆಭರಣಗಳನ್ನು ಮತ್ತು ಎಂಟು ವಿವಿಧ ಕಂಪನಿಯ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ ಈತನಿಂದ ಸುಮಾರು ೫,೬೦,೯೦೦/- ಅಂದಾಜು ಮೊತ್ತದ ಬಂಗಾರ ಬೆಳ್ಳಿ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿಸುವಲ್ಲಿ ರಾಮದುರ್ಗ ಡಿವೈಎಸ ಪಿ ರಾಮನಗೌಡ ಹಟ್ಟಿ ಇವರ ಮಾರ್ಗದರ್ಶನದಲ್ಲಿ ಸಿಪಿಐ ಕರುಣೆಶಗೌಡ ಪಿಎಸ್ಐ ಆನಂದ ಕಾರಕಟ್ಟಿ. ಪೋಲಿಸ ಸಿಬ್ಬಂದಿಗಳಾದ ಎಸ್ ಎಮ್ ಜಾದವ್ ಎಂಪಿ ತೇರದಾಳ್ ಬಿವಿ ಹಿರೇಮಠ. ಎಎಸ್ ಕಪ್ಪತ್ತಿ ಎಸಿ ಕಾಪಸಿ ಹೆಚ್ ಬಿ ವಾಸನ್ ಬಿಬಿ ತಂಗೋಜಿ ಇವರೆಲ್ಲರೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ


