ಸುವರ್ಣ ವಾಹಿನಿ ಬಿಟ್ಟು ರಿಪಬ್ಲಿಕ್ ಕನ್ನಡ ಸೇರಿದ್ರಾ ಜಯಪ್ರಕಾಶ್ ಶೆಟ್ಟಿ..?
ಬೆಂಗಳೂರು : ಸುವರ್ಣ ವಾಹಿನಿಯ ಬಿಗ್ – 3 ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ಹಿರಿಯ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ( Jayaprakash Shetty )ಸಧ್ಯ ಕನ್ನಡದಲ್ಲಿ ಸಂಚಲನ ಹುಟ್ಟು ಹಾಕಿರುವ ಅರ್ನಬ್ ಗೋಸ್ವಾಮಿ ( Arnub Goswami ) ಅವರ ರಿಪಬ್ಲಿಕ್ ಕನ್ನಡ ವಾಹಿನಿ ಸೇರ್ಪಡೆ ಆಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಎದ್ದಿದೆ.
ಈ ಮೊದಲು ಈ ಟಿವಿ ಕನ್ನಡ ಮೂಲಕ ಸುದ್ದಿ ನಿರೂಪಣೆ ಮಾಡುತ್ತಾ ವೃತ್ತಿಬದುಕು ಪ್ರಾರಂಭಿಸಿದ್ದ ಜಯಪ್ರಕಾಶ್ ಶೆಟ್ಟಿ ಮುಂದೆ ನಡೆದಿದ್ದು ಎಲ್ಲವೂ ಇತಿಹಾಸ. ಸಧ್ಯ ಸುವರ್ಣ ವಾಹಿನಿಯಲ್ಲಿ { Suvarna News } ಸುದ್ದಿ ನಿರೂಪಣೆ ಮಾಡುತ್ತಿರುವ ಇವರು ಅರ್ನಬ್ ತೆಕ್ಕೆಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಜಯ್ ಸಂಕೇಶ್ವರ ಒಡೆತನದ ದಿಗ್ವಿಜಯ ಕನ್ನಡ ವಾಹಿನಿಯನ್ನು ಸಧ್ಯ ರಿಪಬ್ಲಿಕ್ ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮಾಲಿಕತ್ವ ಪಡೆದುಕೊಡಿದ್ದಾರೆ.ಈ ಹಿನ್ನಲೆಯಲ್ಲಿ ಬದಲಾವಣೆ ಮೂಲಕ ರಿಪಬ್ಲಿಕ್ ಕನ್ನಡ ವಾಹಿನಿ ಕನ್ನಡಿಗರಿಗೆ ಸೇವೆ ಸಲ್ಲಿಸಲು ನಿಂತಿದೆ.


