ಬೆಳಗಾವಿ : ಬಿಜೆಪಿ ಯುವ ಮುಖಂಡ ಪ್ರದೀಪ್ ಶೆಟ್ಟಿ ನಿಧನ
ಬೆಳಗಾವಿ : ಬಿಜೆಪಿ ಯುವ ಮುಖಂಡ ಹಾಗೂ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರದೀಪ ಶೆಟ್ಟಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.
ನಗರದ ತಾನಾಜಿ ಗಲ್ಲಿನಿವಾಸಿಯಾಗಿದ್ದ ಇವರು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರದೀಪ ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ.
ಪ್ರದೀಪ ಶೆಟ್ಟಿ ನಿಧನಕ್ಕೆ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಕಂಬನಿ ಮಿಡಿದಿದ್ದು, ಮೃತರ ಅಂತ್ಯಕ್ರಿಯೆ ಮಧ್ಯಾಹ್ನ ಜರುಗಲಿದೆ.


