Select Page

Advertisement

25 ಕೋಟಿ ಕೊಡ್ತೆನೆ ಡಿಕೆಶಿ ಆತ್ಮಹತ್ಯೆ ಮಾಡಿಕೊಳ್ತಾರಾ…? ಯತ್ನಾಳ್ ಆಕ್ರೋಶ

25 ಕೋಟಿ ಕೊಡ್ತೆನೆ ಡಿಕೆಶಿ ಆತ್ಮಹತ್ಯೆ ಮಾಡಿಕೊಳ್ತಾರಾ…? ಯತ್ನಾಳ್ ಆಕ್ರೋಶ

ರಾಯಚೂರು : ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ನಾನು ಹಣ ಕೊಡುತ್ತೇನೆ ಡಿಸಿಎಂ ಹಾಗೂ ಸಚಿವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಆಕ್ರೋಶ ಹೊರಹಾಕಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಇವರು. ರೈತರ ಆತ್ಮಹತ್ಯೆ ಬಗ್ಗೆ ಕಾಂಗ್ರೆಸ್‌ನವರು ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮ ವಿಜಯಪುರದ ಮಂತ್ರಿಯೊಬ್ಬರು 5 ಲಕ್ಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ, ನಾನು ಅವರಿಗೆ 5 ಕೋಟಿ ರೂ. ಕೊಡ್ತಿನಿ ಅವರು ಆತ್ಮಹತ್ಯೆ ಮಾಡಿಕೊಳ್ತಾರಾ?

ನೀನು ಆತ್ಮಹತ್ಯೆ ಮಾಡ್ಕೊತೀನಿ ಅಂದ್ರೆ 5 ಕೋಟಿ ರೂ. ಕೊಡ್ತಿನಿ, ಡಿಕೆ ಶಿವಕುಮಾರ್‌ ಶ್ರೀಮಂತ ಇರೋದ್ರಿಂದ 25 ಕೋಟಿ ರೂ. ಕೊಡ್ತಿನಿ ಎಂದು ಯತ್ನಾಳ್ ಸವಾಲೆಸೆದರು.

ಡಿಕೆ ಶಿವಕುಮಾರ್‌ ಸೇರಿ ಕಾಂಗ್ರೆಸ್‌ನವರಿಗೆ 135 ಸೀಟ್ ಬಂದಿದೆ ಅಂತ ಅಹಂಕಾರ ಬಂದಿದೆ. ಹೀಗಾಗಿ ರೈತರ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ, ಇಂದಿರಾ ಗಾಂಧಿ ಅಂತವರೆ ಸೋತು ಹೋದರು, ಇವರೆಲ್ಲಾ ಯಾವ ಲೆಕ್ಕ ಎಂದರು

Advertisement

Leave a reply

Your email address will not be published. Required fields are marked *

error: Content is protected !!