Select Page

Advertisement

ದಿಗ್ವಿಜಯ ಸುದ್ದಿ ವಾಹಿನಿ ಖರೀದಿಸಿದ ಅರ್ನಬ್ ಗೋಸ್ವಾಮಿ ; ಇನ್ಮುಂದೆ ರಿಪಬ್ಲಿಕ್ ಕನ್ನಡ

ದಿಗ್ವಿಜಯ ಸುದ್ದಿ ವಾಹಿನಿ ಖರೀದಿಸಿದ ಅರ್ನಬ್ ಗೋಸ್ವಾಮಿ ; ಇನ್ಮುಂದೆ ರಿಪಬ್ಲಿಕ್ ಕನ್ನಡ

ಬೆಂಗಳೂರು : “ ಇಂಡಿಯಾ ವಾಂಟ್ಸ್ ಟು ನೋ ” ಎನ್ನುತ್ತ ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಪತ್ರಕರ್ತ ಅರ್ನಬ್ ಗೋಸ್ವಾಮಿ ಕನ್ನಡದ ಸುದ್ದಿ ವಾಹಿನಿ ಖರೀದಿ ಮಾಡುವ ಮೂಲಕ ಮತ್ತೊಂದು ಮಹತ್ವದ ಸಾಹಸಕ್ಕೆ ಕೈ ಹಾಕಿದ್ದಾರೆ.

ಯಶಸ್ವಿ ಉದ್ಯಮಿ ಡಾ. ವಿಜಯ್ ಸಂಕೇಶ್ವರ್ ಅವರ ದಿಗ್ವಿಜಯ ಕನ್ನಡ ವಾಹಿನಿಯನ್ನು ಪತ್ರಕರ್ತ ಅರ್ನಬ್ ಗೋಸ್ವಾಮಿ ಖರೀದಿಸಿದ್ದು, ಹಸ್ತಾಂತರ ಪ್ರಕ್ರಿಯೆ ಮುಕ್ತಾಯವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಿಪಬ್ಲಿಕ್ ಕನ್ನಡ ಎಂಬ ಹೆಸರಿನಿಂದ ಪ್ರಾರಂಭ ಆಗಲಿದೆ.

ಕನ್ನಡದ ನಂ – ೧ ಪತ್ರಿಕೆ ವಿಜಯವಾಣಿಯ ಮಾಲಿಕರು ಹಾಗೂ ವ್ಹಿ ಆರ್ ಎಲ್ ಸಮೂಹದ ಒಡೆಯ ಡಾ. ವಿಜಯ್ ಸಂಕೇಶ್ವರ್ ದಿಗ್ವಿಜಯ ವಾಹಿನಿ ಪ್ರಾರಂಭ ಮಾಡಿದ್ದರು. ಯಶಸ್ವಿಯಾಗಿ ಮುನ್ನಡೆಸಿದ್ದ ಇವರು ಸಧ್ಯ ತಮ್ಮ ವಾಹಿನಿಯನ್ನು ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ಮಡಿಲಿಗೆ ಹಾಕಿದ್ದಾರೆ.

2017 ರಲ್ಲಿ ರಿಪಬ್ಲಿಕ್ ವಾಹಿನಿ ಪ್ರಾರಂಭಿಸಿದ್ದ ಅರ್ನಬ್ ಗೋಸ್ವಾಮಿ ದೇಶಾದ್ಯಂತ ಸಂಚಲನ ಹುಟ್ಟು ಹಾಕಿದ್ದರು. ಈಗಾಗಲೇ ಇವರ ರಿಪಬ್ಲಿಕ್ ಭಾರತ್, ರಿಪಬ್ಲಿಕ್ ವಲ್ಡ್೯, ರಿಪಬ್ಲಿಕ್ ಬಾಂಗ್ಲಾ ಮೂಲಕ ಮೂರು ವಾಹಿನಿ ನಡೆಸುತ್ತಿದ್ದು. ಸಧ್ಯ ರಿಪಬ್ಲಿಕ್ ಕನ್ನಡ ಪ್ರಾರಂಭದ ಹೊಸ್ತಿಲಲ್ಲಿದೆ.

Advertisement

Leave a reply

Your email address will not be published. Required fields are marked *

error: Content is protected !!