ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ
ಬೆಳಗಾವಿ : ನಗರದ ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು ಗಾಯಗೊಂಡವು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ ಮಂಡ್ಯ ಮೂಲದ ವಿಚಾರಣಾ ದೀನ ಕೈದಿ ಸಾಯಿಕುಮಾರ್ ಎಂಬಾತನ ಮೇಲೆ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಂಕರ ಭಜಂತ್ರಿ ಎಂಬಾತ ಸ್ಕ್ರೂ ಟ್ರೈವರ್ ನಿಂದ ಹಲ್ಲೆ ಮಾಡಿದ್ದಾನೆ. ಸಧ್ಯ ಗಾಯಗೊಂಡ ಕೈದಿಯನ್ನು ನಗರದ ಜಿಲ್ಲಾ ಆಸ್ಪತ್ರೆಯ ಎಸ್ ಐ ಸಿ ಯು ವಿಭಾಗದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ಈ ಹಲ್ಲೆ ಘಟನೆ ಕುರಿತು ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಆದರೆ ಹಲ್ಕೆಗೊಳಗಾದ ಕೈದಿ ಸಾಯಿಕುಮಾರ ಅವರ ಎದೆ, ಕಿವಿ ಹಾಗೂ ಬೆನ್ನಿನ ಭಾಗದಲ್ಲಿ ಗಾಯವಾಗಿವೆ. ಕೊಲೆ ಮಾಡಿವ ಉದ್ದೇಶದಿಂದಲೇ ಈ ರೀತಿಯ ಹಲ್ಲೆ ಯತ್ನ ನಡೆದಿತ್ತಾ ಎಂಬ ಸಂಶಯ ಮೂಡಿದೆ.


