BELAGAVI – ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿಗಳ ಕೊಲೆ
ಹುಕ್ಕೇರಿ : ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದಲ್ಲಿ ನಡೆದಿದೆ.
ಮಾವನೂರ ಗ್ರಾಮದಲ್ಲಿ ದಂಪತಿ ಭೀಕರ ಹತ್ಯೆಯಾಗಿದ್ದುಗಜೇಂದ್ರ ವಣ್ಣೂರೆ(60), ದ್ರಾಕ್ಷಾಯಿಣಿ ವಣ್ಣೂರೆ(48) ಕೊಲೆಯಾದ ದಂಪತಿ. ಸ್ವಂತ ಮನೆಯಲ್ಲೆ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಜುಲೈ 7ರ ಮಧ್ಯರಾತ್ರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆಯಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದು ಬಾಗಿಲು ತಗೆದು ನೋಡಿದಾಗ ಜೋಡಿ ಕೊಲೆ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡು ಆರೋಪಗಳಿಗೆ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಂಪತಿ ಮೃತದೇಹಗಳು ರವಾನೆ ಮಾಡಲಾಗಿದೆ. ಯಮಕಣಮರಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


