ಬೆಳಗಾವಿ : ಗಣೇಶೋತ್ಸವದ ಹಬ್ಬ ಆಚರಿಸಿ ಬೆಂಕಿಯ ಕೆನ್ನಾಲೆಯಲ್ಲಿ ಬೆಂದು ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದರು. ತಂದೆ, ಮಗ ಗಂಭೀರವಾಗಿ ಗಾಯಗೊಂಡಿದ್ದರು. ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರೋಷನ್ ದಮೋನೆ (21) ಗಜಾನನ ದಮೋನೆ (61) ಮೃತಪಟ್ಟ ದುರ್ದೈವಿಗಳು. ಮನೆಯ ಫ್ರಿಜ್ಡ್ ಸ್ಪೋಟಗೊಂಡ ವೇಳೆ ಗಂಭೀರವಾಗಿ ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಧ್ಯ ಇಡೀ ಕುಟುಂಬವೇ ಇಲ್ಲದಂತಾಗಿದೆ.
ಏನಿದು ಘಟನೆ : ಗಣೇಶ ಚತುರ್ಥಿ ಹಬ್ಬದ ಸಡಗರದಲ್ಲಿದ್ದ ಬಡ ಕುಟುಂಬದ ಬಾಳಿನಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ಫ್ರಿಡ್ಜ್ ಸ್ಪೋಟಗೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವಣಪ್ಪಿದ್ದು ಗಂಭೀರವಾಗಿ ಗಾಯಗೊಂಡ ಇಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು.
ಘಟನೆಯಲ್ಲಿ ನಗರದ ಚವ್ಹಾಟಗಲ್ಲಿಯ ನಿವಾಸಿಗಳಾದ ಭಾರತಿ ರಾಜಾರಾಮ ದಮೋನೆ (50), ಶಾರದಾ ಗಜಾನನ ದಮೋನೆ (45), ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ಮೃತಪಟ್ಟ ದುರ್ದೈವಿಗಳು. ಇನ್ನೂ ಗಂಭೀರವಾಗಿ ಗಾಯಗೊಂಡ ರೋಷನ್ ದಮೋನೆ (21) ಗಜಾನನ ದಮೋನೆ (61) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.
ಸೋಮವಾರ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ದಾಮೋನೆ ಕುಟುಂಬ ಸಂಭ್ರಮದಿಂದ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಿ ಸಡಗರದಿಂದ ಹಬ್ಬ ಆಚರಣೆ ಮಾಡಿತ್ತು. ರಾತ್ರಿ ಊಟ ಮಾಡಿ ನಿದ್ರೆ ಮಾಡುವ ವೆಳೆ ಸುಮಾರು 1:30 ಕ್ಕೆ ವಿದ್ಯುತ್ ಅವಘಡ ಸಂಭವಿಸಿದೆ. ಈ ವೇಳೆ ಮನೆಯಲ್ಲಿದ್ದ ಫ್ರಿಡ್ಜ್ ಸ್ಪೋಡಗೊಂಡಿದ್ದು ಚಿಕ್ಕ ತಗಡಿನ ಶೆಡ್ ನಲ್ಲಿ ವಾಸವಿದ್ದ ಇಡೀ ಕುಟುಂಬ ಬೆಂಕಿಗೆ ಸುಟ್ಟು ಭಸ್ಮವಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಮಾರ್ಕೆಟ್ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ಹೆಸ್ಕಾಂ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿಯಲ್ಲಿ ಬೆಂದು, ನರಳಾಡುತ್ತಿದ್ದ ಗಜಾನನ ಮತ್ತು ಪುತ್ರ ರೋಷನ್ ಅವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಡಿಸಿಪಿ ನಾರಾಯಣ ಬರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತ ನಾಲ್ವರ ಅಂತ್ಯಕ್ರಿಯೆಯನ್ನು ಸದಾಶಿವನಗರದ ಸ್ಮಶಾನದಲ್ಲಿ ನಡೆಯಿತು.
************
ಬಾಕ್ಸ್ :::::
ಸಂಭ್ರಮದಿಂದ ಹಬ್ಬ ಆಚರಿಸಿ ಫೋಟೋ ಹಾಕಿದ್ದ ಕುಟುಂಬ
ಬಡತನದ ಕಾರಣಕ್ಕೆ ತಗಡಿನ ಶೆಡ್ ನಲ್ಲಿ ವಾಸವಿದ್ದ ದಮೋನೆ ಕುಟುಂಬದಲ್ಲಿ ಹಬ್ಬದ ಆಚರಣೆಗೆ ಏನೂ ಕಡಿಮೆ ಇರಲಿಲ್ಲ. ಕುಟುಂಬದ ಎಲ್ಲಾ ಸದಸ್ಯರು ಸೇರಿ ಗಣೇಶ ವಿಗ್ರಹ ತಂದು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಇಡೀ ಕುಟುಂಬ ಬೆಂಕಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಳಿದುಳಿದ ಇಬ್ಬರೂ ಸದಸ್ಯರು ಭಾಗಶಃ ಸುಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
***************
50 ಸಾವಿರ ನಿವೇಶನಗಳನ್ನು ನೀಡುವ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರ ಮನೆ ನಿರ್ಮಿಸಿಕೊಟ್ಟರೂ ಇಲ್ಲಿನ ಜನರು ಬೇರೆಡೆ ತೆರಳಿ ವಾಸಿಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಮನೆ ಇಲ್ಲದವರಿಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಸತೀಶ್ ಜಾರಕಿಹೊಳಿ
ಸಚಿವ
**********




