ಬೆಳಗಾವಿ : ಸಂಪುಟ ವಿಸ್ತರಣೆ ‌ಕಸರತ್ತು ಮುಕ್ತಾಯವಾಗಿದ್ದು ನಿನ್ನೆಯಷ್ಟೇ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆದಿದೆ. ಇಂದು ಎಲ್ಲಾ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ ‌ಮಾಡಲಾಗಿದೆ.

ಬೆಳಗಾವಿಯಿಂದ ಇಬ್ಬರು ಶಾಸಕರಿಗೆ ಮಂತ್ರಿ ಸ್ಥಾನ ಲಭಿಸಿದ್ದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಇನ್ನುಳಿದಂತೆ ನೂತನ ಸಚಿವ ಲಕ್ಷ್ಮಣ ಸವದಿ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಜವಾಬ್ದಾರಿ ನೀಡಿದ್ದು, ಧಾರವಾಡಕ್ಕೆ ಸಂತೋಷ್ ಲಾಡ್, ವಿಜಯಪುರಕ್ಕೆ ಎಂ.ಬಿ ಪಾಟೀಲ್, ಬಾಗಲಕೋಟೆಗೆ ವಿಜಯಾನಂದ ಕಾಶಪ್ಪನವರ ಅವರನ್ನು ‌ನೇಮಕ ಮಾಡಲಾಗಿದೆ.