ಬೆಳಗಾವಿ : ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸಿ, ಆರು ವರ್ಷದ ಮಗುವಿನ ಎದುರೇ ಕೊಡಲಿಯಿಂದ ಹತ್ಯೆ ಮಾಡಿದ ಪತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಥಣಿ ತಾಲೂಕಿನ ಖವಟಗೊಪ್ಪ ಗ್ರಾಮದಲ್ಲಿ ಕಳೆದ ಜೂ. 28ರಂದು ನಡೆದಿದೆ. ಹತ್ಯೆಯಾದ ಮಹಿಳೆಯನ್ನು ಶೋಭಾ ಪರಗೊಂಡ ಸಾರವಾಡ (35)ಗೆ ಆಕೆಯ ಪತಿ ಪರಗೊಂಡ ಸಂಗಪ್ಪ ಸಾರವಾಡ (35) ಕೊಲೆ ಮಾಡಿದ್ದಾನೆ. ಜೂ.27ರ ರಾತ್ರಿ ದಂಪತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಆರೋಪಿ ಸಂಗಪ್ಪ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದರು.
ಪತ್ನಿ ಶೋಭಾ ಅವರು ಸಂಬಂಧಿಕರು ಹಾಗೂ ಕೆಲಸದವರೊಂದಿಗೆ ಮಾತನಾಡಿದರೂ ಅನುಮಾನ ಪಡುತ್ತಿದ್ದ ಪತಿಯ ವರ್ತನೆಯಿಂದ ಬೇಸತ್ತಿದ್ದರು ಎಂದು ತಿಳಿದುಬಂದಿದೆ.
ಇದೇ ವಿಚಾರವಾಗಿ ಎರಡೂ ಕುಟುಂಬಗಳ ಹಿರಿಯರು ಹಲವು ಬಾರಿ ಸಂಗಪ್ಪನಿಗೆ ಬುದ್ಧಿವಾದ ಹೇಳಿದ್ದರು.ಘಟನೆಯ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಆರು ವರ್ಷದ ಮಗುವಿನ ಕಣ್ಣೆದುರೆ ಕೊಲೆ ಮಾಡಿದ್ದಾನೆ ಎಂದರು.


