ಕೃಷ್ಣಾನದಿಗೆ 2 ಲಕ್ಷ 20 ಸಾವಿರ ಕ್ಯೂಸೆಕ್ ನೀರು ; ಪ್ರವಾಹದ ಮಟ್ಟ ಮತ್ತಷ್ಟು ಏರಿಕೆ
ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬ್ಯಾರೇಜಗಳಿಂದ ಸುಮಾರು ಕರ್ನಾಟಕ್ಕೆ ಸುಮಾರು 2 ಲಕ್ಷ 20 ಸಾವಿರ ಕ್ಯೂಸೆಕನಷ್ಟು ನೀರು ಹರಿದು ಬರುತ್ತಿದ್ದು, ಪ್ರವಾಹದ ಪ್ರಮಾಣದ ಮತ್ತಷ್ಟು ಏರಿಕೆಯಾಗಿದೆ.
ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಯಡೂರ,ಕಲ್ಲೋಳ,ಚಂದೂರ,ಇಂಗಳಿ ಸೇರಿದಂತೆ ಇನ್ನಿತರ ಗ್ರಾಮದ ನದಿತೀರದಲ್ಲಿ ಇವತ್ತು ಭಾರೀ ಪ್ರಮಾಣದಲ್ಲಿ ನೀರು ಏರಿಕೆಯಾಗಿದೆ.
ನದಿ ತನ್ನ ಪಾತ್ರವನ್ನು ಬಿಟ್ಟು ಹರಿಯುತ್ತಿದೆ.ತಾಲೂಕಾಡಳಿತ ಮುಂಜಾಗ್ರತಾ ಕ್ರಮವಾಗಿ ನದಿತೀರದಲ್ಲಿ ಬೋಟಗಳ ವ್ಯವಸ್ಥೆ, ನೂಡಲ್ ಅಧಿಕಾರಿಗಳನ್ನು ನೇಮಿಸಿ, ಬ್ಯಾರಿಕೆಡ್ ಹಾಕಿ ನದಿತೀರದಲ್ಲಿ ಜನರು ಹೋಗದಂತೆ ಕಟ್ಟೆಚೆರವನ್ನು ವಹಿಸಿದೆ.


