ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹರಿಬಿಟ್ಟ ಕಿಡಿಗೇಡಿ ; ಯುವತಿ ಆತ್ಮಹತ್ಯೆಗೆ ಶರಣು
ಕಲಬುರಗಿ : ಸೋಶಿಯಲ್ ಮೀಡಿಯಾದಲ್ಲಿ ತನ್ನ ಜೊತೆಗಿನ ಪೋಟೋ ಹರಿಬಿಟ್ಟ ಕಾರಣಕ್ಕೆ ಬೆಣ್ಣೇತೋರಾ ಡ್ಯಾಂ ಹಿನ್ನಿರಿಗೆ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಬಳಿ ನಡೆದಿದೆ.
ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ ಯುವತಿ ಸಾಕ್ಷಿ ಉಪ್ಪಾರ್ (22) ಬೆಣ್ಣೆತೋರಾ ಹಿನ್ನಿರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಅಭಿಷೇಕ ಮಾಳಗೆ ಎಂಬ ಯುವಕ ಕಿರುಕುಳ ನೀಡಿದ್ದಾನೆ
ಎನ್ನುವ ಆರೋಪ ಕೇಳಿಬಂದಿದ್ದು, ಸಾಕ್ಷಿ ಜತೆಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ವೈರಲ್ ಮಾಡಿದ್ದ ಎನ್ನಲಾಗಿದ್ದು, ಅದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.
ಯುವತಿಯ ಮೃತದೇಹಕ್ಕಾಗಿ ಅಗ್ನಿಶಾಮಕ ದಳವು ಕುರಿಕೋಟ ಡ್ಯಾಂನಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಮಹಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


