ರಾಜಕೀಯ ಬಿಡುತ್ತೇನೆ ಹೊರತು ಚಿಕ್ಕಪ್ಪನ ಬಿಡಲ್ಲ ; ವಿರೋಧಿಗಳ ವಿರುದ್ಧ ಗುಡುಗಿದ ನಿಖಿಲ್ ಕತ್ತಿ..!
ಹುಕ್ಕೇರಿ : ಚಿಕ್ಕಪ್ಪ ರಮೇಶ್ ಕತ್ತಿ ಅವರನ್ನು ದೂರವಿಟ್ಟು ರಾಜಕಾರಣ ಮಾಡು ಎಂದು ಅನೇಕರು ಹೇಳಿದ್ದರು. ಆದರೆ ರಾಜಕಾರಣ ಬಿಡುತ್ತೇನೆ ಹೊರತು ಚಿಕ್ಕಪ್ಪನ ಬಿಟ್ಟು ಕೊಡಿವ ಮಾತೇ ಇಲ್ಲ ಎಂದು ದಿ. ಉಮೇಶ್ ಕತ್ತಿ ಪುತ್ರ ಹಾಗೂ ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಹೇಳಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ನಡೆದಿದ್ದ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಆಡಿದ ಮಾತು ಸಾಕಷ್ಟು ಚರ್ಚೆ ಆಗುತ್ತಿದೆ. ಹಾಗಾದರೆ ಕತ್ತಿ ಮನೆತನ ಒಡೆಯುವ ಪ್ರಯತ್ನ ನಡೆದಿತ್ತಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಸಾಕಷ್ಟು ಕಾಡುತ್ತಿದೆ.
ದಿ. ಉಮೇಶ್ ಕತ್ತಿ ನಿದನದ ನಂತರ ಅವರ ಶಾಸಕ ಸ್ಥಾನಕ್ಕೆ ಪುತ್ರ ನಿಖಿಲ್ ಕತ್ತಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಚಿಕ್ಕಪ್ಪ ರಮೇಶ್ ಕತ್ತಿ ಅವರನ್ನು ದೂರವಿಡಲು ಕೆಲವರು ಕುತಂತ್ರ ನಡೆಸಿದ್ದು ಬಯಲಾಗಿದೆ.
ಸಭೆಯಲ್ಲಿ ಶಾಸಕ ನಿಖಿಲ ಕತ್ತಿ ಮಾತನಾಡಿ. ತಾಲೂಕಿನಲ್ಲಿ ಅನೇಕರು ಚಿಕ್ಕಪ್ಪ ರಮೇಶ್ ಕತ್ತಿ ಅವರನ್ನು ದೂರವಿಟ್ಟು ರಾಜಕಾರಣ ಮಾಡುವಂತೆ ಹೇಳಿದ್ದರು. ಸಂದರ್ಭ ಬಂದರೆ ರಾಜಕಾರಣ ಬಿಡುತ್ತೇನೆ ಹೊರತು ಚಿಕ್ಕಪ್ಪನ್ನು ಬಿಟ್ಟುಕೊಡುವ ಮಾತೇ ಇಲ್ಲ.
ಜನರ ಸೇವೆಗೆ ನಮ್ಮ ಕುಟುಂಬ ಇಗ್ಗಟ್ಟಿನಿಂದ ಇದ್ದು, ಬೆರೆಯುವರಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಸ್ವ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಕತ್ತಿ ಕುಟುಂಬ ಎಚ್ಚರಿಕೆ ನೀಡಿದ್ದು, ಮುಂದೆ ಯಾವೆಲ್ಲ ಬೆಳವಣಿಗೆ ಆಗುತ್ತವೆ ಎಂದು ಕಾದು ನೋಡಬೇಕು.


