ವಚನಾನಂದ ಶ್ರೀ ಸಹೋದರ ರಸ್ತೆ ಅಪಘಾತದಲ್ಲಿ ಸಾವು
ಬೆಳಗಾವಿ : ಹರಿಹರ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಹಾಗೂ ಶ್ವಾಸಯೋಗ ಸಂಸ್ಥೆಯ ವಚನಾನಂದ ಶ್ರೀಗಳ ಪೂರ್ವಾಶ್ರಮದ ಸಹೋದರ ರಸ್ತೆ ಅಪಘಾತದಲ್ಲಿ ಸಾವಣಪ್ಪಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾವಂಶಿ ಗ್ರಾಮದ ಅಶೋಕ ಗೌರಗೊಂಡ ಬುಧವಾರ ತಡರಾತ್ರಿ ತಾಲೂಕಿನ
ಭರಮೋಕೋಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಣಪ್ಪಿದ್ದಾರೆ. ಬೈಕ್ ಗೆ ನಾಯಿ ಅಡ್ಡಬಂದ ಪರಿಣಾಮ ಘಟನೆ ಸಂಭವಿಸಿದೆ.
ಮೃತ ಅಶೋಕ ತಾಯಿ, ಮಡದಿ ಮೂವರು ಹೆಣ್ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾವಂಶಿ ಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.


