ಗೋವು ರಕ್ಷಕ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿದ ಮುಸಲ್ಮಾನರು
ಚಿಕ್ಕೋಡಿ : ಗೋ ಶಾಲೆಯಿಂದ ಬೇರೆಡೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆಗೆ ಮುಂದಾಗಿದ್ದ,ಶ್ರೀ ರಾಮ ಸೇನೆ ಕಾರ್ಯಕರ್ತರ ಮೇಲೆ ಮುಸ್ಲಿಂ ಸಮುದಾಯದ ದಲ್ಲಾಳಿಗಳು ಮನ ಬಂದಂತೆ ಥಳಸಿ ನೈತಿಕ ಪೊಲೀಸಗಿರಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಬೆಳವಿ ಗೋ ಶಾಲೆಯಿಂದ ಗೋವುಗಳನ್ನ ಇಂಗಳಿ ಗ್ರಾಮಕ್ಕೆ ವಾಪಸ್ಸು ಕರೆದೋಯುತ್ತಿದ್ದ ಮುಸ್ಲಿಂ ದಲ್ಲಾಳಿಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಶ್ನೆ ಮಾಡಿರುವುದಕ್ಕೆ ರೊಚ್ಚಿಗೆದ್ದ ಮುಸ್ಲಿಂ ದಲ್ಲಾಳಿಗಳು, 5 ಜನ ಶ್ರೀ ರಾಮ ಸೇನೆ ಕಾರ್ಯಕರ್ತರ ಮೇಲೆ ಮಾರಣಾಂತಿಕವಾಗಿ ಮನಬಂದಂತೆ ,ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ.
ಮರಕ್ಕೆ ಕಟ್ಟಿಹಾಕಿ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿ ವಿಡಿಯೋ ಮಾಡಿ ಯಾರು ಗೋ ಸಾಗಾಣಿಕೆ ವಿರುದ್ದ ಪ್ರಶ್ನೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಗೋ ರಕ್ಷಣೆನೆಗೆ ಮುಂದಾಗಿದ್ದ ಹಿಂದೂ ಕಾರ್ಯಕರ್ತರ ಮೇಲೆ ನೈತಿಕ ಪೊಲೀಸಗಿರಿ ನಡೆಸಿರುವ ಮುಸ್ಲಿಂ ದಲ್ಲಾಳಿಗಳ ಹಲ್ಲೆ ಹಿಂದು ಪರ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


