Select Page

Advertisement

ಜೂನ್. 26 ಕ್ಕೆ ವೀರೇಶ್ವರ ಶ್ರೀಗಳ ಮೌನ ಲಿಂಗಾನುಷ್ಠಾನ ಸಮಾರೋಪ ಸಮಾರಂಭ

ಜೂನ್. 26 ಕ್ಕೆ ವೀರೇಶ್ವರ ಶ್ರೀಗಳ ಮೌನ ಲಿಂಗಾನುಷ್ಠಾನ ಸಮಾರೋಪ ಸಮಾರಂಭ

ಚನ್ನಮ್ಮನ ಕಿತ್ತೂರು : ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದ ಗುರು ಮಡಿವಾಳೇಶ್ವರ ಮಠದ ಶ್ರೀ ವೀರೇಶ್ವರ ಮಹಾಸ್ವಾಮಿಗಳು ಲೋಕ ಕಲ್ಯಾಣಾರ್ಥವಾಗಿ ನಡೆಸುತ್ತಿರುವ ಮೌನ ಲಿಂಗಾನುಷ್ಠಾನದ ಸಮಾರೋಪ ಸಮಾರಂಭ ಬರುವ ಗುರುವಾರ ಜರುಗಲಿದೆ.

ಜೇಷ್ಠ ಮಾಸದ ಪ್ರಯುಕ್ತ ಶ್ರೀ ವೀರೇಶ್ವರ ಸ್ವಾಮೀಜಿ ಲೋಕಕಲ್ಯಾಣಾರ್ಥವಾಗಿ ಕೈಗೊಂಡಿರುವ ಮೌನ ಲಿಂಗಾನುಷ್ಠಾನದ ಸಮಾರೋಪ ಸಮಾರಂಭ ಹಾಗೂ ಸರ್ವಧರ್ಮ ಸಮ್ಮೇಳನ ಗುರುವಾರ ಜೂನ್. 26 ರಂದು ನಡೆಯಲಿದೆ.



ಕಳೆದ ಮೇ. 28 ರಿಂದ ಶ್ರೀಗಳು ಮೌನ ಲಿಂಗಾನುಷ್ಠಾನ ಕೈಗೊಂಡಿದ್ದಾರೆ.‌ ಗುರುವಾರ ಬೆಳಿಗ್ಗೆ 10 ರಿಂದ ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದ ಗುರು ಮಡಿವಾಳೇಶ್ವರ ಮಠದಲ್ಲಿ ಮೌನ ಲಿಂಗಾನುಷ್ಠಾನದ ಸಮಾರೋಪ ಸಮಾರಂಭ ಹಾಗೂ ಧರ್ಮಸಭೆ ಮತ್ತು ತುಲಾಭಾರ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮಕ್ಕೆ ಸದ್ಭಕ್ತರು ಬಂದು ಶ್ರೀಗಳ ಆಶೀರ್ವಾದ ಪಡೆಯಬೇಕೆಂದು ಶ್ರೀಮಠದ ಕಾರ್ಯದರ್ಶಿ ಸುಶಾಂತ್ ಹಿರೇಮಠ್ ಪ್ರಕಟಣೆಯಲ್ಲಿ ಕೋರಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!