Select Page

Advertisement

ಕೊಚ್ಚಿಹೋದ ಸೇತುವೆ ; ಬೆಳಗಾವಿ – ಗೋವಾ ಸಂಚಾರ ಬಂದ್

ಕೊಚ್ಚಿಹೋದ ಸೇತುವೆ ; ಬೆಳಗಾವಿ – ಗೋವಾ ಸಂಚಾರ ಬಂದ್

ಬೆಳಗಾವಿ : ಮಲಪ್ರಭಾ ನದಿಗೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಪರಿಣಾಮ ಬೆಳಗಾವಿ – ಗೋವಾ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಖಾನಾಪುರ ತಾಲೂಕಿನ ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸಧ್ಯ ತಾತ್ಕಾಲಿಕವಾಗಿ ಬೃಹತ್ ಪೈಪ್ ನಿಂದ ಸೇತುವೆ ನಿರ್ಮಿಸಲಾಗಿತ್ತು. ಸಧ್ಯ ಮಳೆ ಆರ್ಭಟ ಹೆಚ್ಚಾದ ಹಿನ್ನಲೆಯಲ್ಲಿ ನೀರಿನ ರಭಸಕ್ಕೆ ಸೇತುವೆ ಕೊಚ್ಚಿಕೊಂಡು ಹೋಗಿದೆ.

ಸಧ್ಯ ಚೋರ್ಲಾ ಮಾರ್ಗವಾಗಿ ಗೋವಾಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಧ್ಯ ಖಾನಾಪುರ ಮಾರ್ಗವಾಗಿ ರಾಮನಗರದಿಂದ ಗೋವಾಗೆ ತೆರಳಬಹುದು.‌

Advertisement

Leave a reply

Your email address will not be published. Required fields are marked *

error: Content is protected !!