Select Page

Advertisement

ಗಡಿಯಲ್ಲಿ ಪಾಕಿಸ್ತಾನದಿಂದ ಮತ್ತೆ ಡ್ರೋಣ್ ದಾಳಿ ; ವೀಡಿಯೋ ಹಂಚಿಕೊಂಡ ಸ್ಥಳೀಯರು

ಗಡಿಯಲ್ಲಿ ಪಾಕಿಸ್ತಾನದಿಂದ ಮತ್ತೆ ಡ್ರೋಣ್ ದಾಳಿ ; ವೀಡಿಯೋ ಹಂಚಿಕೊಂಡ ಸ್ಥಳೀಯರು

ನವದೆಹಲಿ : ಗಡಿಯಲ್ಲಿ ಪಾಕಿಸ್ತಾನ ಡ್ರೋಣ್ ದಾಳಿ ಮುಂದುವರಿಸಿದೆ. ಮೂರು ಪ್ರದೇಶಗಳ ಸುಮಾರು 25 ಕ್ಕೆ ಹೆಚ್ಚು ಡ್ರೋಣ್ ಗಳು ಭಾರತದ ಕಡೆ ಹಾರಿಬಂದಿದೆ.

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಕೆಲವೇ ಸಮಯದಲ್ಲಿ ಪಾಕಿಸ್ತಾನ ಮತ್ತೆ ಡ್ರೋಣ್ ದಾಳಿ ಮುಂದುವರಿಸಿದೆ.

ಪಾಕಿಸ್ತಾನದ 25 ಡ್ರೋಣ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸುವ ಕೆಲಸ ಮಾಡುತ್ತಿದ್ದು, ಗಡಿ ಭಾಗದ ಕೆಲ ಪ್ರದೇಶಗಳಲ್ಲಿ ಬ್ಲ್ಯಾಕ್ ಔಟ್ ಮಾಡಲಾಗಿದೆ.

ಸಾಂಬಾ, ಜಮ್ಮು ಕಾಶ್ಮೀರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಡ್ರೋಣ್ ದಾಳಿ ಮಾಡಲಾಗಿದೆ. ಒಟ್ಟಿನಲ್ಲಿ ಪಾಕಿಸ್ತಾನ ತನ್ನ ಹಳೇ ಕೆಲಸವನ್ನೇ ಮುಂದುವರಿಸಿದ್ದು, ಭಾರತ ಯಾವ ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.

Advertisement

Leave a reply

Your email address will not be published. Required fields are marked *

error: Content is protected !!