ಆಸ್ತಿ ವಿಚಾರಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಹತ್ಯೆ…? ಅನುಮಾನ ಹುಟ್ಟುಹಾಕಿದ ಪತ್ನಿ ವೀಡಿಯೋ ಕಾಲ್
ಬೆಂಗಳೂರು : ರಾಜ್ಯದ ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಅವರ ಬರ್ಬರ ಹತ್ಯೆಯಾಗಿದ್ದು, ನಗರದ ಹೆಚ್.ಎಸ್.ಆರ್ ಲೇಔಟ್ ನಲ್ಲಿ ಘಟನೆ ಸಂಭವಿಸಿದೆ.
ದಾಂಡೇಲಿ ಆಸ್ತಿ ವಿಚಾರಕ್ಕೆ ಓಂ ಪ್ರಕಾಶ್ ಅವರ ಪತ್ನಿ ಗಲಾಟೆ ಮಾಡುತ್ತಿದ್ದರು. ನಂತರ ಆಗಾಗ್ಗೆ ಈ ಕುರಿತು ಕಲಹ ಇತ್ತು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಆಸ್ತಿಯನ್ನು ಓಂ ಪ್ರಕಾಶ್ ತಮ್ಮ ಸಹೋದರಿಯರ ಹೆಸರಿಗೆ ಮಾಡಿದ್ದು ಕೊಲೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.
ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿದ ನಂತರ ಅವರ ಪತ್ನಿ
ಪಲ್ಲವಿ ಅವರು ಐಪಿಎಸ್ ಅಧಿಕಾರಿ ರೂಪಕ್ ದತ್ತಾ ಅವರ ಪತ್ನಿಗೆ ಮೆಸೆಜ್ ಹಾಕಿದ್ದು – I have finished the monster ಎಂದು ಗಂಡನ ಶವ ತೋರಿಸಿ ಹೇಳಿಕೊಂಡಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ರಕ್ತದ ಕಲೆಗಳನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.


