Select Page

Advertisement

ಹಂದಿಗಳ ಬಗ್ಗೆ ನಾನು ಮಾತಾಡಲ್ಲ ; ಕಾಶಪ್ಪನವರ ವಿರುದ್ಧ ಯತ್ನಾಳ್ ಆಕ್ರೋಶ

ಹಂದಿಗಳ ಬಗ್ಗೆ ನಾನು ಮಾತಾಡಲ್ಲ ; ಕಾಶಪ್ಪನವರ ವಿರುದ್ಧ ಯತ್ನಾಳ್ ಆಕ್ರೋಶ

ಬೆಳಗಾವಿ : ಹಂದಿಗಳ‌ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ವಿಜಯೇಂದ್ರ ಹೇಳಿ ಕಳುಹಿಸಿದ್ದಾನೆ. ನಾನು ಎಲ್ಲಾ ಸಮುದಾಯದ ಪರ ಇರುವವನು. ಅವರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಯತ್ನಾಳ್ ( yatnal ) ಆಕ್ರೋಶ ಹೊರ ಹಾಕಿದ್ದಾರೆ.

ಕೂಡಲಸಂಗಮ ಶ್ರೀಗಳನ್ನು ಪಂಚಮಸಾಲಿ ( panchamasali swamiji ) ಪೀಠದಿಂದ ಕೆಳಗಿಳಿಸುವ ಕುರಿತು ವಿಜಯಾನಂದ ಕಾಶಪ್ಪನವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ. ನಮ್ಮದು, ಸ್ವಾಮೀಜಿಯದು ಮೀಸಲಾತಿ ಹೋರಾಟದ ಸಂಬಂಧ. ಅನೇಕರು

ಸ್ವಾಮೀಜಿಯನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಆದನೆ ನಾನು ಯಾವತ್ತೂ ಬಳಸಿಕೊಂಡಿಲ್ಲ. ಕೆಲವರು ವಿಜಯೇಂದ್ರ ( b y vijayendra ) ಪರವಾಗಿ ಮಾತನಾಡುವುದನ್ನು ಮುಂದುವರಿಸಿದ್ದಾರೆ ಅವರ ಹೇಳಿಕೆಗೆ ಉತ್ತರಿಸಲ್ಲ ಎಂದರು.

ಯಡಿಯೂರಪ್ಪ ( B S yadiyurappa ) ಕುಟುಂಬವನ್ನು ಬಿಜೆಪಿಯಿಂದ ಹೊರ ಹಾಕುವ ವರೆಗೂ ನಾನು ಬಿಜೆಪಿ ಪಕ್ಷಕ್ಕೆ ಮರಳುವುದಿಲ್ಲ.‌ ಈ ನಿಟ್ಟಿನಲ್ಲಿ ನನ್ನ ಹೋರಾಟ ನಿರಂತರವಾಗಿ ಮುಂದು‌ ವರಿಯಲಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿ ಪ್ರತಿಕ್ರಿಯೆ ನೀಡಿದ ಇವರು. ಚನ್ನಮ್ಮನ ನಾಡು ಬೆಳಗಾವಿ ಇಲ್ಲಿಂದಲೇ ಕ್ರಾಂತಿ ಪ್ರಾರಂಭ ಆಗಿದ್ದು, ಸ್ವಾತಂತ್ರ‍್ಯ ಹೋರಾಟಗಾರರು ನಮಗೆ ಆದರ್ಶ.

ಹೈಕಮಾಂಡ್ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ತಲೆ ಮೇಲೆ ಕೂಡಿಸಿಕೊಂಡಿರಬಹುದು. ಚುನಾವಣೆ ಬರಲಿ ಆಗ ಮಾತನಾಡುತ್ತೇನೆ ಎಂದರು.


Advertisement

Leave a reply

Your email address will not be published. Required fields are marked *

error: Content is protected !!