ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ವ್ಯಕ್ತಿಯ ಬಂಧನ
ಚನ್ನಮ್ಮನ ಕಿತ್ತೂರು : ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಮಂಗಳವಾರ ನಡು ರಸ್ತೆಯಲ್ಲೇ ಹಾಡಹಗಲೇ ಕೊಚ್ಚಿ ವ್ಯಕ್ತಿಯ ಮಾರಣಾಂತಿಕ ಹಲ್ಲೆಗೆ ಯತ್ನಿಸಿ ಪರಾರಿ ಆಗುತ್ತಿದ್ದ ವ್ಯಕ್ತಿಯನ್ನು ಕಿತ್ತೂರು ಪೋಲಿಸ್ ರು ಬಂಧಿಸಿದಾರೆ.
ಕುಡಗೋಲಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆಗೆ ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಯಾನಕ ದೃಶ್ಯ ವೈರಲ್ ಆಗಿದೆ. ಅರವಳ್ಳಿ ಗ್ರಾಮದ ಮಕ್ತುಮ್ ತಟಗಾರ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸವಟಗಿ ಗ್ರಾಮದ ಮುತ್ತು ಗಣಾಚಾರಿ ಎಂಬಾತನಿಂದ ಹತ್ಯೆಗೆ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಹತ್ಯೆಯ ಬಳಿಕ ತಾಯಿಯ ಜೊತೆಗೆ ತಪ್ಪಿಸಿಕೊಂಡು ಹೋಗುತ್ತಿರುವ ವೇಳೆ ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.


