ಪೊಲೀಸರ ವಿರುದ್ಧ ಸಿಡಿದೆದ್ದ ಬೆಳಗಾವಿ ಪತ್ರಕರ್ತರು ; ಹಲ್ಲೆ ಖಂಡಿಸಿ ಪ್ರತಿಭಟನೆ
ಬೆಳಗಾವಿ : ಕಳೆದ ಕೆಲ ದಿನಗಳಿಂದ ಬೆಳಗಾವಿ ಜಿಲ್ಲಾ ಪೊಲೀಸರು ಪತ್ರಕರ್ತರ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿ ಶನಿವಾರ ಬೆಳಗಾವಿ ಪೊಲೀಸ್ ಆಯುಕ್ತರು ಕಚೇರಿ ಎದುರು ಜಿಲ್ಲಾ ಪತ್ರಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಅನವಶ್ಯಕವಾಗಿ ಪೊಲೀಸರು ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ತಮ್ಮ ತಪ್ಪುಗಳನ್ನು ಸಾರ್ವಜನಿಕರಿಂದ ಮರೆಮಾಚಲು ಮಾಧ್ಯಮಗಳನ್ನು ದೂರ ಇಡುವ ಕೆಲಸ ನಡೆಯುತ್ತಿದೆ. ಜನರಿಗೆ ಸತ್ಯಾಸತ್ಯತೆ ತಿಳಿಸುವ ಮಹತ್ವದ ಜವಾಬ್ದಾರಿ ಹೊತ್ತ ಪತ್ರಕರ್ತರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿರುವ ಪೊಲೀಸರ ನಡೆ ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ದಿಲೀಪ್ ಕುರುಂದವಾಡೆ, ಸಹದೇವ್ ಮಾನೆ, ರಮೇಶ್ ಹಿರೇಮಠ, ಚಂದ್ರು ಶ್ರೀರಾಮುಡು, ಸಂತೋಷ್ ಶ್ರೀರಾಮುಡು, ಶ್ರೀಕಾಂತ್ ಕುಬಕಡ್ಡಿ, ಶ್ರೀಧರ ಕೊಟಾರಗಸ್ತಿ, ಮಂಜುನಾಥ ಪಾಟೀಲ್, ರವಿ ಉಪ್ಪಾರ, ವಿನಾಯಕ ಮಠಪತಿ, ಚಂದ್ರಕಾಂತ ಸುಗಂಧಿ, ರಾಜು ಹಿರೇಮಠ, ಸಂತೋಷ ಚಿನಗುಡಿ, ಮೈಲಾರಿ ಪಟಾತ್, ಅನಿಲ್ ಕಾಜಗಾರ, ಸುಬಾನಿ ಮುಲ್ಲಾ, ಜಗದೀಶ್ ವಿರಕ್ತಮಠ, ಸುನಿಲ್ ಪಾಟೀಲ್ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆ ಪ್ರತಿನಿಧಿಗಳು ಉಪಸ್ಥಿತರಿದ್ದರು.


