Select Page

Advertisement

ವಿವಾಹಿತ‌ ಮಹಿಳೆ ಆತ್ಮಹತ್ಯೆಗೆ ಶರಣು

ವಿವಾಹಿತ‌ ಮಹಿಳೆ ಆತ್ಮಹತ್ಯೆಗೆ ಶರಣು

ಕಾಗವಾಡ : ಮನೆಯಲ್ಲಿ ಮಾನಸಿಕ ಹಿಂಸೆಯಿಂದ ಮನನೊಂದು ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಗವಾಡದಲ್ಲಿ ನಡೆದಿದೆ.

ಧನಶ್ರೀ ಚೇತನ ಮಹಲದಾರ (23) ಮೃತ ದುರ್ದೈವಿ. ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಧನಶ್ರೀ ತವರು ಮನೆ ನೆರೆಯ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಕೌಟೆಸಾರ ಗ್ರಾಮವಾಗಿದ್ದು ಕಳೆದ ಮೂರು ವರ್ಷಗಳ ಹಿಂದೆ ಚೇತನ ಮಹಲದಾರ ಇತನಿಗೆ ಮದುವೆ ಮಾಡಿ ಕೊಡಲಾಗಿತ್ತು.

ಒಂದುವರೆ ವರ್ಷ ವಯಸ್ಸಿನ ಮಗನಿದ್ದು ಪತಿ ಚೇತನ ಹಾಗೂ ಅತ್ತೆ ಪದೆ ಪದೇ ಮಾನಸಿಕ ಹಿಂಸೆ ಕೊಡುತ್ತಿದ್ದರು. ನನ್ನ ಮಗಳು ಎಂ ಎಸ್ಸಿ ಪದವೀಧರೆಯಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ನಮಗೆ ನ್ಯಾಯ ಬೇಕು ಎಂದು ಧನಶ್ರೀ ಪೋಷಕರು ಆಗ್ರಹಿಸಿದ್ದಾರೆ.

ಈ ಕುರಿತು ಕಾಗವಾಡ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಜಿ ಜಿ ಬಿರಾದರ ತನಿಖೆ ಕೈಗೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!