ನೌಕರ ಆತ್ಮಹತ್ಯೆ ಪ್ರಕರಣ ; ತಲೆಮರಿಸಿಕೊಂಡಿದ್ದ ತಹಶೀಲ್ದಾರ ಪ್ರತ್ಯಕ್ಷ
ಬೆಳಗಾವಿ : ತಹಶೀಲ್ದಾರ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಎಸ್ ಡಿ ಎ ನೌಕರ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಹಶೀಲ್ದಾರ ಬಸವರಾಜ ನಾಗರಾಳ ಶುಕ್ರವಾರ ತಮ್ಮ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದು ಕರ್ತವ್ಯಕ್ಕೆ ಮರಳಿದ್ದಾರೆ.
ನೌಕರ ಆತ್ಮಹತ್ಯೆ ದಿನ ತಲೆಮರೆಸಿಕೊಂಡಿದ್ದ ತಹಶಿಲ್ದಾರ ಬಸವರಾಜ ನಾಗರಾಳ ಶುಕ್ರವಾರ ತಮ್ಮ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ರುದ್ರಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ ಗುರುವಾರ ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
ಕಳೆದ ನ. 5 ರಂದು ಬೆಳಿಗ್ಗೆ ನಗರದ ತಹಶೀಲ್ದಾರ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮೃತ ನೌಕರ ರುದ್ರಣ್ಣ ತನ್ನ ಸಾವಿಗೆ ತಹಶೀಲ್ದಾರ ಬಸವರಾಜ ನಾಗರಾಳ ಸೇರಿ ಮೂವರ ಹೆಸರು ಬರೆದು ವಾಟ್ಸಪ್ ಮೆಸೇಜ್ ಕಳುಹಿಸಿದ್ದರು. ಆ ನಂತರ ತಹಶೀಲ್ದಾರ ಮೇಲೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


