ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಮಗ
ಬೆಂಗಳೂರು : ಹಣಕ್ಕಾಗಿ ಹೆತ್ತ ತಾಯಿಯನ್ನೇ ಮಗ ಹಾಗೂ ಆತನ ಸ್ನೇಹಿತ ಸೇರಿ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರದ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ನಡೆದಿದೆ.
ಜಯಮ್ಮ ಎಂಬುವವರು ಮೃತ ಮಹಿಳೆ. ಆಕೆಯ ಮಗ ಉಮೇಶ್ ಹಣಕ್ಕಾಗಿ ತಾಯಿಯೊಂದಿಗೆ ಸದಾಕಾಲವೂ ಜಗಳ ಮಾಡುತ್ತಿದ್ದ. ಎರಡನೇ ಮಗನ ಮೇಲೆ ಅತಿಯಾಗಿ ಪ್ರೀತಿ ನೀಡುತ್ತೀಯಾ ಎಂದು ಆರೋಪ ಮಾಡುತ್ತಿದ್ದ.
ಮಗನ ಜಗಳಕ್ಕೆ ಬೇಸತ್ತು ಜಯಮ್ಮ ಇದ್ದ ಮನೆ ಮಾರಿ ಬೇರೆಕಡೆ ಹೋಗಿ ನೆಲೆಸಿದ್ದರು. ಮನೆ ಮಾರಿದ್ದ ಹಣ ಕೊಡುವಂತೆ ಪೀಡಿಸಿ ನಂತರ ಸ್ನೇಹಿತನ ಜೊತೆ ಸೇರಿ ತಾಯಿಯನ್ನು ಕೊಲೆ ಮಾಡಿದ್ದಾನೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು. ಇಬ್ಬರೂ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


