Select Page

Advertisement

ಕಿತ್ತೂರು ಉತ್ಸವದ ವೇದಿಕೆಯಲ್ಲೇ ಪ್ರಾಣಬಿಟ್ಟ ಕಲಾವಿದ

ಕಿತ್ತೂರು ಉತ್ಸವದ ವೇದಿಕೆಯಲ್ಲೇ ಪ್ರಾಣಬಿಟ್ಟ ಕಲಾವಿದ

ಚನ್ನಮ್ಮನ ಕಿತ್ತೂರು : ಚನ್ನಮ್ಮನ ಕಿತ್ತೂರು ಉತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕಲಾವಿದ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಇಲ್ಲಿಯ ಚನ್ನಮ್ಮನ ಕೋಟೆ ಆವರಣದಲ್ಲಿರುವ ಚನ್ನಮ್ಮನ ವೇದಿಯಲ್ಲಿ ಏರ್ಪಡಿಸಿದ್ದ ಭಜನಾ ಸ್ಪರ್ಧೆಯಲ್ಲಿ ಭಜನಾ ತಂಡದ ಸದಸ್ಯರೊಂದಿಗೆ ಭಾಗವಸಿದ ಕಲಾವಿದ ಭಜನಾ ಸ್ಪರ್ಧೆ ಮುಗಿಸಿ ವೇದಿಕೆಯಿಂದ ಕೆಳಗೆ ಇಳಿಯುವ ಸಮಯದಲ್ಲಿ ತಾಲೂಕಿನ ಬಸಾಪುರ ಗ್ರಾಮದ ಈರಪ್ಪ ಫಕ್ಕೀರಪ್ಪ ಬಬ್ಲಿ (48) ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಮೃತರ ಮನೆಗೆ ಶಾಸಕ ಬಾಬಾಸಾಹೇಬ ಪಾಟೀಲ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!