Select Page

ಕ್ಷುಲ್ಲಕ ‌ಕಾರಣಕ್ಕೆ‌ ಮಹಿಳೆ ಮೇಲೆ ಹಲ್ಲೆ ; ಕಣ್ಣೀರು ಹಾಕಿದ ಪತ್ನಿ

ಕ್ಷುಲ್ಲಕ ‌ಕಾರಣಕ್ಕೆ‌ ಮಹಿಳೆ ಮೇಲೆ ಹಲ್ಲೆ ; ಕಣ್ಣೀರು ಹಾಕಿದ ಪತ್ನಿ

ಬೆಳಗಾವಿ‌ : ಕ್ಷುಲ್ಲಕ ಕಾರಣಕ್ಕೆ ಪತಿ, ಪತ್ನಿ ನಡುವೆ ಗಲಾಟೆಯಲ್ಲಿ ಪತ್ನಿಗೆ ಪತಿ ಮನಸೋ ಇಚ್ಚೆ ಥಳಿಸಿದ ಘಟನೆ ಶುಕ್ರವಾರ ಕುದರೆಮನಿ ಗ್ರಾಮದಲ್ಲಿ ನಡೆದಿದೆ.

ಗುರುವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ಮಟನ್ ಊಟ ಮಾಡಿದ್ದರು. ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಇದ್ದರು. ಇದಕ್ಕೆ ಕುಪಿತಗೊಂಡ ಪತಿ ಏಕನಾಥ ಮಹಾದೇವ ಕಾಂಬಳೆ ಹಾಗೂ ಇತನ ಸಹೋದರಿಯರು ಪ್ರಮೀಳಾ ಕಾಂಬಳೆಗೆ ಮನಸೋ ಇಚ್ಚೆ ಹಲ್ಲೆ‌‌ ಮಾಡಿದ್ದಾರೆ ಎನ್ನುವ ಆರೋಪ ಹಲ್ಲೆಗೊಳಗಾದ ಪ್ರಮೀಳಾ ಕಾಂಬಳೆ ಮಾಡಿದ್ದಾರೆ.

ಕಳೆದ ಏಂಟು ವರ್ಷಗಳ‌ ಹಿಂದೆ ಏಕನಾಥ ಮಹಾದೇವ ಕಾಂಬಳೆಯೊಂದಿಗೆ ಪ್ರಮೀಳಾ ಮದುವೆಯಾಗಿತ್ತು. ಮನೆಯಲ್ಲಿ ಸಣ್ಣಪುಟ್ಟ ವಿಷಯಕ್ಕೂ ಏಕನಾಥ ಕಾಂಬಳೆ ಗಲಾಟೆ ಮಾಡಿ ಪದೇ ಪದೇ ಹಲ್ಲೆ ಮಾಡುತ್ತಿದ್ದ. ಕಳೆದ ಕೆಲ‌ ದಿನಗಳಿಂದ ಆತನ ಸಹೋದರಿಯರು ಸೇರಿ ಹಲ್ಲೆ ಮಾಡಿದ್ದರು ಎಂದು ಪ್ರಮೀಳಾ ತಾಯಿ ಇಂದುಬಾಯಿ ಮಾಳಕರಿ ಆರೋಪಿಸಿದ್ದಾರೆ.

ಎರಡ್ಮೂರು ಬಾರಿ ಹಿರಿಯರೊಂದಿಗೆ ರಾಜಿ ಪಂಚಾಯತಿ ಮಾಡಲಾಗಿತ್ತು. ಮತ್ತೇ ಈಗ ಅದೇ ಚಾಳಿ ಮುಂದುವರೆಸಿದ್ದಾನೆ ಏಕನಾಥ್ ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಇಂದುಬಾಯಿ ಹೇಳಿದರು. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!