Select Page

Advertisement

ಅಥಣಿ ಜನರಿಗೆ ಸಾಹುಕಾರ್ ಸಿಹಿಸುದ್ದಿ….ಏನದು…?

ಅಥಣಿ ಜನರಿಗೆ ಸಾಹುಕಾರ್ ಸಿಹಿಸುದ್ದಿ….ಏನದು…?

ಅಥಣಿ : ತಾಲೂಕಿನ ಪೂರ್ವ ಭಾಗದ ಅನೇಕ ಹಳ್ಳಿಗಳ ರೈತರ ಸು. 60 ಸಾವಿರ ಎಕರೆ ಭೂಮಿಗೆ ನೀರಾವರಿ ಒದಗಿಸುವ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ಮುಂಬರುವ 2 ವರ್ಷದಲ್ಲಿ ಪೂರ್ಣಗೊಳಿಸಿ ಈ ಭಾಗದ ಬರಡು ಭೂಮಿಗೆ ನೀರು ಒದಗಿಸಲಾಗಿವದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಶನಿವಾರ ಅಥಣಿ ಪೂರ್ವಭಾಗದ ಮಹತ್ವಕಾಂಕ್ಷಿ ಯೋಜನೆ ಅಮ್ಮಾಜೇಶ್ವರಿ ನೀರಾವರಿ ಯೋಜನೆಯ ಕಾಮಗಾರಿಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಅಮ್ಮಾಜೇಶ್ವರಿ ನೀರಾವರಿ ಯೋಜನೆಗೆ ಕಳೆದ ಮಾರ್ಚ್ ತಿಂಗಳಲ್ಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಚಾಲನೆ ನೀಡಿದ್ದಾರೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಆರಂಭವಾಗಿದೆ.ಉತ್ತಮ ಗುಣಮಟ್ಟದ ಕಾಮಗಾರಿಯನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಸಹಾಯದಿಂದ ಈ ಯೋಜನೆಗೆ ನಬಾರ್ಡ್ ನಿಂದಲೂ ಹಣಕಾಸಿನ ನೆರವು ಪಡೆಯಲು ಅನುಮತಿ ಪಡೆಯಲಾಗಿದೆ.

ಈ ಯೋಜನೆ ಎರಡು ವರ್ಷದಲ್ಲಿ ಪೂರ್ಣಗೊಂಡರೆ ಈ ಭಾಗದ ರೈತರ ಬದುಕು ಬಂಗಾರವಾಗುವ ಕಾಲ ಸನ್ನಿಹಿತವಾಗಿದೆ ಎಂದರು. ಈ ವೇಳೆ ಹಿಪ್ಪರಗಿ ಅಣೆಕಟ್ಟು ಯೋಜನೆಯ ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ್ ಹುಣಸಿಕಟ್ಟಿ, ಹಾಗೂ ಅಮೋಘ ಬೋಬ್ರಿ ಶ್ರೀಶೈಲ ಶಲ್ಲೆಪ್ಪಗೋಳ.

ಅಪ್ಪು ಜಮಾದಾರ. ರಾಜು ಕಾರಂಡೆ. ರವಿ ಸಿಂಧೆ ಬುಡ್ಡು ಜಮಾದಾರ. ಅಪ್ಪು ಬಿಜ್ಜರಗಿ, ಕುಮಾರ ಸಿಂಧೆ. ಮಲ್ಲು ಕುಲ್ಲೋಳ್ಳಿ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!