ಹಿಂಡಲಗಾ ಜೈಲು ಎಂದಾಕ್ಷಣ ಕಣ್ಣೀರು ಹಾಕಿದ ಕೊಲೆಗಡುಕ ಡಿ ಗ್ಯಾಂಗ್ ಸದಸ್ಯ ಪ್ರದೂಶ್
ಬೆಳಗಾವಿ : ಪರಪ್ಪನ ಅಗ್ರಹಾರದಲ್ಲಿ ಐಶಾರಾಮಿ ಸವಲತ್ತು ಪಡೆದಿದ್ದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ ಗ್ಯಾಂಗ್ ನಲ್ಲಿದ್ದ ಆರೋಪಿ ಪ್ರದೂಶ್ ಬುಧವಾರ ರಾತ್ರಿ ಬೆಳಗಾವಿ ಹಿಂಡಲಗಾ ಕಾರಾಗೃಹಕ್ಕೆ ಬರಲಿದ್ದಾನೆ.
ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡುವ ವಿಷಯ ತಿಳಿಯುತ್ತಿದ್ದಂತೆ ಪ್ರದೂಶ್ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ. ರಾಜ್ಯದಲ್ಲೇ ಅತ್ಯಂತ ದೊಡ್ಡ ಜೈಲಾಗಿರುವ ಹಿಂಡಲಗಾ ಕೊಲೆಗಡುಕ ಆರೋಪಿಗಳಿಗೆ ಹೇಳಿ ಮಾಡಿಸಿದ ಜಾಗ. ವಿಪರೀತ ಮಳೆ, ಬಿಸಿಲಿನಿಂದ ಕೂಡಿದ ಬೆಳಗಾವಿ ವಾತಾವರಣದಲ್ಲಿ ಕಾಲ ಕಳೆಯುವುದು ಸುಲಭವಲ್ಲ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಆರೋಪಿ ದರ್ಶನ ಪಡೆದಿದ್ದ ಐಶಾರಾಮಿ ಸೌವಲತ್ತು ಈಗ ರಾಜ್ಯದಲ್ಲರುವ ಪ್ರಮುಖ ಕಾರಾಗೃಹಕ್ಕೆ ಆರೋಪಿಗಳನ್ನು ಸ್ಥಳಾಂತರ ಮಾಡಲಿದ್ದಾರೆ.
ಎ- 2 ಆರೋಪಿ ದರ್ಶನ ಬಳ್ಳಾರಿ, ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರದೂಶ್, ಮೈಸೂರು ಜೈಲಿಗೆ ನಂದೀಶ್, ರಾಘವೇಂದ್ರ, ಪವನ, ವಿಜಯಪುರ ಜೈಲಿಗೆ ವಿನಯ್, ಧಾರವಾಡ ಜೈಲಿಗೆ ಧನರಾಜ ಸೇರಿದಂತೆ ವಿವಿಧ ಕಾರಾಗೃಹಕ್ಕೆ
ಕೊಲೆ ಆರೋಪಿಗಳನ್ನು ಸ್ಥಳಾಂತರ ಮಾಡಲಿದ್ದಾರೆ. ಅದರಂತೆ ಪ್ರದೂಶ್ ಬೆಳಗಾವಿ ಹಿಂಡಲಗಾ ಕಾರಾಗೃಹಕ್ಕೆ ಇಂದು ರಾತ್ರಿ ಪೊಲೀಸರು ಕರೆ ತರಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


