Select Page

Advertisement

ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ; ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗಿದ ದೌರ್ಜನ್ಯ ಪ್ರಕರಣ

ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ; ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗಿದ ದೌರ್ಜನ್ಯ ಪ್ರಕರಣ

ರಾಯಬಾಗ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಯುವಕನನ್ನು ಸಾರ್ವಜನಿಕರು ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ ಘಟನೆ ರಾಯಬಾಗ ಪೋಲೀಸ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

 

 

ಶಾಲೆ ಬಿಟ್ಟ ನಂತರ ತನ್ನ ಸ್ವಗ್ರಾಮಕ್ಕೆ ಹೋಗಲು ಬಸ್ಸಿನ ದಾರಿ ಕಾಯುತ್ತ ನಿಂತಾಗ ರಾಯಬಾಗ ಖೈರಕೋಡಿ ನಿವಾಸಿ ಸುನೀಲ ಧೀಪಾಳಿ ಎಂಬಾತ ಆಕಡೆಗೆ ಹೋಗುತ್ತಿದ್ದೇನೆ. ನಿನಗೆ ಅಲ್ಲಿ ಬಿಡುವದಾಗಿ ಹೇಳಿ ಮೋಟರ ಬೈಕ್ ಮೇಲೆ ಕುಳ್ಳಿರಿಸಿಕೊಂಡು ಹೋಗಿದ್ದಾನೆ.

 

 

ಮಾರ್ಗ ಮಧ್ಯದಲ್ಲಿ ದಾರಿ ತಪ್ಪಿಸಿ ಬೇರೆ ಕಡೆಗೆ ಹೊರಟಾಗ ನಮ್ಮೂರ ದಾರಿ ಇದಲ್ಲ ಎಂದು ಬಾಲಕಿ ಹೇಳಿದಾಗ ಸುಮ್ಮನೇ ಕುಳಿತುಕೋ ಎಂದು ಆವಾಜ ಹಾಕಿ ಭೀಮ್ ನಗರದ ಹತ್ತಿರ ತಗ್ಗು ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ.

 

 

ಆಗ ಗಾಬರಿಗೊಂಡ ವಿದ್ಯಾರ್ಥಿ ಕಿರುಚಾಡಿದ್ದಾಳೆ. ಆಕೆಯ ಕಿರಿಚಾಟ ಕೇಳಿದ ಸ್ಥಳೀಯರು ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ವಿಷಯ ತಿಳಿದ ಬಾಲಕಿಯ ತಂದೆ ಮಹಾದೇವ ಹುಲ್ಯಾಳೆ ರಾಯಬಾಗ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದಾನೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Leave a reply

Your email address will not be published. Required fields are marked *

error: Content is protected !!